ಮಂಗಳವಾರ, ಮಾರ್ಚ್ 20, 2012

ಪರೀಕ್ಷೆ ಭೂತ

            ಪರೀಕ್ಷೆ ಎಂದೊಡನೆ ಎಲ್ಲಾ ವಿದ್ಯಾರ್ಥಿಗಳೂ ಆತಂಕ, ಒತ್ತದಕ್ಕೊಳಗಾಗುವುದು ಸಹಜ.  ಏಕೆಂದರೆ ಈಗಿನ ಸ್ಪರ್ಧಾಯುಗದಲ್ಲಿ ಎಲ್ಲರಿಗೂ ಮೊದಲ ರೆಂಕ್ ಬರುವ ಹಂಬಲ.  ಹಲವು ವರ್ಷಗಳಿ೦ದಿತ್ತೀಚಿಗೆ ಬಹುತೇಕ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಪರೀಕ್ಷೆ ಎಂದರೆ ಒಂದು ಭೂತದಂತೆ ಅದನ್ನು ಪ್ರತಿಬಿಂಬಿಸಿ ಮಕ್ಕಳನ್ನು ಇನ್ನೂ ಭಯಭೀತರನ್ನಾಗಿಸುತ್ತಿವೆ. ಫೆಬ್ರವರಿ ತಿಂಗಳು ಆರಂಭಗೊಳ್ಳುತ್ತಿದ್ದಂತೆಯೇ ಇವರ ಲೇಖನಮಾಲೆ ಆರಂಭಗೊಳ್ಳುತ್ತವೆ.  ಮಕ್ಕಳು ಹಾಗೆ ಓದಬೇಕು, ಹೀಗೆ ಓದಬೇಕು, ಬೆಳಿಗ್ಗೆ ಇಷ್ಟು ಗಂಟೆಗೆ ಏಳಬೇಕು, ರಾತ್ರಿ ಇಷ್ಟರವರೆಗೆ ಓದಬೇಕು, ಪರೀಕ್ಷೆಯ ಹಿಂದಿನ ದಿನ ಹೇಗಿರಬೇಕು, ಪರೀಕ್ಷೆಯ ದಿನ ಹೇಗಿರಬೇಕು  ಇವೇ ಮುಂತಾದವು.  

         ಹಲವು ವಿದ್ಯಾರ್ಥಿಗಳು ಇವನ್ನೆಲ್ಲಾ ಓದಿ, ತಾವು ಈ ರೀತಿ ಮಾಡದಿದ್ದರೆ ಎಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವೆನೋ, ಕಡಿಮೆ ಅಂಕ ಬರಬಹುದೋ ಎನ್ನುವ ಆತಂಕದಿಂದ ಒತ್ತಡಕ್ಕೊಳಗಾಗಿ ತಮ್ಮ ಸಹಜವಾಗಿರುವ ಓದಿನ ಸಾಮರ್ಥ್ಯವನ್ನೂ ಸಹ ಕಳೆದುಕೊಳ್ಳಬಹುದೆಂಬ ಅನಿಸಿಕೆ ನನ್ನದು.  ಹಾಗಾಗಿ ಪರೀಕ್ಷೆ ಎಂದರೆ ಅದೊಂದು ಯುದ್ಧದಂತೆ ಬಿಂಬಿಸುವುದನ್ನು ಬಿಟ್ಟು ಅವರ ಪಾಡಿಗೆ ಅವರನ್ನು ಓದಲು ಬಿಡುವುದು ಉತ್ತಮ. 

ಕಿರಣ ಹೊಸ್ಮನೆ, ಗೋಕರ್ಣ